ಮಹಿಳಾ ಸಬಲೀಕರಣ
ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಒದಗಿಸಲು ಮತ್ತು ಅವರ ಜೀವನವನ್ನು ಸುಧಾರಿಸಲು, ಉತ್ತಮವಾದ ಆರೋಗ್ಯಕರವಾದ ಆಹಾರವನ್ನು ಒದಗಿಸುವ ಒಂದು ಸಣ್ಣ ಪ್ರಯತ್ನದೊಂದಿಗೆ ಖಾದ್ಯ ತೈಲವನ್ನು ಹೊರತೆಗೆಯುವ ಸಾಂಪ್ರದಾಯಿಕ ವಿಧಾನವಾದ " ಕ್ಯಾಟಲ್ ಡ್ರೈವನ್ ಆಯಿಲ್ ಮಿಲ್ " , ಆಹಾರ ಬಳಕೆ ವಸ್ತುಗಳ ಪೊಟ್ಟಣ ಕಟ್ಟುವಿಕೆ, ಗಂಧದಕಡ್ಡಿ ತಯಾರಿಕಾ ಘಟಕ ,ಅಡಿಕೆ ಎಲೆಗಳ ತಟ್ಟೆ ತಯಾರಿಕೆ ಘಟಕ,ಹಸು ಸಾಕಾಣಿಕೆ, ಹಾಲು ಉತ್ಪಾದನಾ ಘಟಕ ಸ್ಥಾಪಿಸುವ ಒಂದು ಸಣ್ಣ ಉಪಕ್ರಮವನ್ನು ನಾವು ಕೈಗೊಂಡಿದ್ದೇವೆ . ನಮ್ಮ ಮೂಲ ಉದ್ದೇಶವೇನೆಂದರೆ, "ಗ್ರಾಮೀಣ ಮಹಿಳೆಯರಿಗೆ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡಿ ಅವರ ಜೀವನವನ್ನು ಆರ್ಥಿಕವಾಗಿ ಸ್ಥಿರಗೊಳಿಸಿ ಬಲಪಡಿಸುವುದಾಗಿದೆ. ಹಾಗೂ ಗ್ರಾಮೀಣ ಪ್ರದೇಶದ ಜನರ ಆರೋಗ್ಯಕರವಾದ ಜೀವನವನ್ನು ನಡೆಸಲು ಉತ್ತೇಜಿಸುವುದಾಗಿದೆ "