ಹಳ್ಳಿಗಳಿಂದ ಕೂಡಿರುವ ನಮ್ಮ ಭಾರತ ದೇಶಕ್ಕೆ ರೈತರ ದುಡಿಮೆಯೇ ಬೆನ್ನೆಲುಬು . ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಿಂದ ಜನರು ಪಟ್ಟಣ ಪ್ರದೇಶಗಳಿಗೆ ಜೀವನೋಪಾಯಕ್ಕೆ ವಲಸೆ ಹೋಗುತ್ತ್ತಿರುವುದು ವಿಷದಾನಿಯ . ಹಳ್ಳಿಗಳ್ಲಲಿ ಸೌಲಭ್ಯಗಳು ಸಾಕಷ್ಟಿವೆ, ಅವುಗಳ ಪ್ರಯೋಜನ ಪಡೆದು ಹಳ್ಳಿಗಳಲ್ಲಿಯೇ ಉದ್ಯೋಗ ಕಲ್ಪಿಸುವ ಯೋಜನೆಗಳನ್ನು ಮನನ ಮಾಡೋಣ.
ಹೊರದೇಶಗಳಲ್ಲಿ ತಯಾರಾಗುವ ಕರಕುಶಲ ಹಾಗೂ ಅಗತ್ಯ ವಸ್ತುಗಳಿಗೆ ಆಕರ್ಷಿತರಾಗಿ ಅವುಗಳನ್ನು ಆಮದು ಮಾಡಿಕೊಳ್ಳುವುದು ಪ್ರಾರಂಭವಾದಾಗಿನಿಂದ ನಮ್ಮ ವಸ್ತುಗಳಿಗೆ ಬೇಡಿಕೆಗಳು ಕಡಿಮೆಯಾಗಿ ಜನರಿಗೆ ಕೆಲಸವಿಲ್ಲದೆ ನಿರುದ್ಯೋಗ ಸಮಸ್ಯೆ ಪ್ರಾರಂಭವಾಯ್ತು .
ಇತ್ತೀಚಿನ ದಿನಗಳಲ್ಲಿ ಪ್ರಧಾನ ಮಂತ್ರಿ ಮೋದಿಜಿ ಯವರು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಹಳ್ಳಿಗಳಲ್ಲಿ ಸ್ವಯಂ ಉದ್ಯೋಗ ಕಲ್ಪಿಸಿ ಹಲವು ಬಗೆಯಲ್ಲಿ ಹಳ್ಳಿಗಳನ್ನು ಪುನಸ್ಚೇತನಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವರು .
ಈ ಕಾರ್ಯಕ್ರಮಕ್ಕೆ ಇಂದು ಜನರು ಸ್ಪಂದಿಸುತ್ತಿರುವುದು ಸಂತೋಷದಾಯಕವಾಗಿದೆ. ಕುಂಬಾರಿಕೆ , ಬಡಗಿತನ , ಕಮ್ಮಾರಿಕೆ , ನೇಕಾರಿಕೆ ಕೆಲಸ ಮಾಡುವವರು , ಇವಲ್ಲದೆ ದಿನನಿತ್ಯದ ಅಗತ್ಯ ವಸ್ತುಗಳಾದ ಸೋಪು, ಸೀಗೆಪುಡಿ , ಹಲ್ಲುಪುಡಿ ಹೀಗೆ ಹಲವಾರು ಗ್ರಾಮೋದ್ಯಮಗಳು ನಮ್ಮ ದೇಶದಲ್ಲಿ ಸಾಕಷ್ಟು ಇವೆ. ಇವುಗಳನ್ನು ಪುನರಾರಂಭಿಸಿ ಮುಂಚೂಣಿಯ ಕಡೆಗೆ ಕರೆದೊಯ್ಯುವ ಜವಾಬ್ದಾರಿ ನಮ್ಮದಾಗಿದೆ . ಹಿಂದಿನ ದಿನಗಳಲ್ಲಿ ಹಳ್ಳಿಗಳಲ್ಲಿಯೇ ಅಡಿಗೆ ಎಣ್ಣೆಯನ್ನು ಗಾಣದ ಮೂಲಕ ತೆಗೆಯುತ್ತಿದ್ದರು . ಗಾಣದಿಂದ ತಯಾರಿಸುವ ಎಣ್ಣೆಯನ್ನು ಉದಾಹರಣೆಯಾಗಿ ತೆಗೆದು ಕೊಂಡು ಅಂಕಿಅಂಶಗಳಿಂದ ಅದರಿಂದ ಬರುವ ಆದಾಯ , ಜನರಿಗೆ ಸಿಗುವ ಉದ್ಯೋಗ ಹಾಗೂ ಆಗುವ ಪ್ರಯೋಜನಗಳನ್ನು ನಿಮ್ಮ್ಮ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ
1. ಭಾರತದ ಒಟ್ಟು ಜನಸಂಖ್ಯೆಯು ಸರಿಸುಮಾರು ನೂರ ಮೂವತ್ತೈದು (135) ಕೋಟಿ, ಒಂದು ಕುಟುಂಬದಲ್ಲಿ 4 ಜನರು ಇರುತ್ತಾರೆ ಎಂದು ಪರಿಗಣಿಸಿದರೆ ಮೂವತ್ತ ಮೂರು (33) ಕೋಟಿ ಕುಟುಂಬವಾಗುತ್ತದೆ ಮತ್ತು ಪ್ರತಿ ಕುಟುಂಬದ ಸರಾಸರಿ ಬಳಕೆ 2 ಲೀಟರ್ ಎಂದು ಪರಿಗಣಿಸಿ, ಅಂದರೆ ಭಾರತಕ್ಕೆ 67 ಕೋಟಿ ಲೀಟರ್ ಖಾದ್ಯ ತೈಲ (Edible Oil) ಅಗತ್ಯವಿರುತ್ತದೆ.
2. ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ, ಎತ್ತಿನ ಗಾಣದಲ್ಲಿ ತೈಲವನ್ನು ಹೊರತೆಗೆಯಲು ಪ್ರಾರಂಭಿಸಿದರೆ, ದಿನಕ್ಕೆ ಬಹಳ ಅಂದರೆ ಇಪ್ಪತ್ತು ಲೀಟರ್ ಅಷ್ಟು ಎಣ್ಣೆಯನ್ನ ತೆಗೆಯಬಹುದು, ಅಂದರೆ 67 ಕೋಟಿ ಲೀಟರ್ ಖಾದ್ಯ ತೈಲ ತೆಗೆಯಲು ನಮಗೆ ಹನ್ನೊಂದು ಲಕ್ಷದ ಇಪ್ಪತ್ತೈದು ಸಾವಿರ ಗಾಣಗಳು ಬೇಕಾಗುತ್ತದೆ .
3. ನಮಗೆ ಗೊತ್ತಿರುವ ಹಾಗೆ ಭಾರತದಲ್ಲಿ ಆರು ಲಕ್ಷ ಐವತ್ತು ಒಂದು ಸಾವಿರ ಹಳ್ಳಿಗಳು ಇದೆ,ಒಂದೊಂದು ಹಳ್ಳಿಗಳಲ್ಲಿ ಎರಡೆರಡು ಗಾಣಗಳನ್ನು ಹಾಕಿದರೆ ಭಾರತದಾದ್ಯಂತ ಸರಿಸುಮಾರು ಹದಿಮೂರು ಲಕ್ಷ ಗಾಣಗಳನ್ನು ಹಳ್ಳಿಗಳಲ್ಲೇ ಹಾಕಬಹುದು ಹಾಗೂ ಹಳ್ಳಿಯಿಂದಲೇ ಎಲ್ಲ ಜನಗಳಿಗೂ ನಾವು ಎಣ್ಣೆಯನ್ನು ಸರಬರಾಜು ಮಾಡಬಹುದು.
4. ಒಂದು ಗಾಣವನ್ನು ನಡೆಸಲು ಮೂರು ಜನಗಳು ಬೇಕಾಗುತ್ತದೆ,ಸ್ನೇಹಿತರೇ ಇಲ್ಲೇ ಇರುವುದು ಆಶ್ಚರ್ಯಕರವಾದ ಸಂಗತಿ, ಹನ್ನೊಂದು ಲಕ್ಷದ ಇಪ್ಪತ್ತೈದು ಸಾವಿರ ಗಾಣಗಳನ್ನು ನಡೆಸಲು ಸುಮಾರು ಮೂವತ್ತ ಮೂರು ಲಕ್ಷದ ಎಪ್ಪತ್ತೈದು ಸಾವಿರ (33,75,000) ಜನಗಳಿಗೆ ಉದ್ಯೋಗ ಸೃಷ್ಟಿಯಾಗುತ್ತದೆ.
5. ಪ್ರತಿಯೊಂದು ಗಾಣವನ್ನು ನಡೆಸಲು ಎರಡು ಎತ್ತುಗಳು ಬೇಕಾಗುತ್ತದೆ, ಅಂದರೆ ಇಪ್ಪತ್ತ ಎರಡು ಲಕ್ಷದ ಐವತ್ತು ಸಾವಿರ (22.5 lakh) ಎತ್ತುಗಳಿಗೆ ಕೆಲಸ ಸಿಗುತ್ತದೆ. ಇದರ ಮೂಲಕ ನಾವು ಎತ್ತುಗಳನ್ನು ಕಟುಕರ ಮನೆಗೆ ಹೋಗುವುದನ್ನು ತಡೆಯಬಹುದು.
6. ಇದನ್ನು ಅನುಷ್ಠಾನಗೊಳಿಸುವ ಮೂಲಕ, ಸುಮಾರು ಮೂರು ಲಕ್ಷ ಕೋಟಿ (3 Lakh Crore) ಹಣ ಗ್ರಾಮಕ್ಕೆ ಹರಿದು ಬರುತ್ತದೆ, ಈ ಹಣವು ಒಂದು ವರ್ಷದ ಭಾರತೀಯ ರಕ್ಷಣಾ ಬಜೆಟ್ ಅಥವಾ 2 ವರ್ಷಗಳ ರೈಲ್ವೇ ಬಜೆಟ್ಗೆ ಸಮನಾಗಿರುತ್ತದೆ.
ನೋಡಿ ಸ್ನೇಹಿತರೆ ಈ ಒಂದು ಉದ್ಯಮದಿಂದ ಇಷ್ಟೊಂದು ಲಾಭ ಉದ್ಯೋಗ ಕಲ್ಪಿಸುವುದು ಆದರೆ ಹೊಸ ಹೊಸ ತಂತ್ರಜ್ಞಾನದಿಂದ ಆವಿಷ್ಕಾರದಿಂದ ಗ್ರಾಮೀಣ ಉದ್ಯಮಗಳನ್ನು ಇನ್ನೂ ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಇನ್ನಿತರ ಹತ್ತು ಹಲವಾರು ಗ್ರಾಮಗಳು ಚಾಲ್ತಿಗೆ ಬಂದರೆ ಭಾರತದ ನಿಲುವು ಹೇಗಿರುತ್ತೆ ನೀವೇ ಯೋಚಿಸಿ
"ಪಟ್ಟಣ ವಾಸಕ್ಕೆ ಮಾರುಹೋಗದೆ ತಮ್ಮ ಹಳ್ಳಿಗಳಲ್ಲಿಯೇ ನೆಲೆಸಿ ಉತ್ತಮ ಜೀವನಶೈಲಿಯನ್ನು ರೂಪಿಸಿಕೊಳ್ಳುವುದಕ್ಕೆ ಸಹಾಯ ಮಾಡುವ ಪ್ರಯತ್ನ ನಮ್ಮದು"
This message is an attempt to answer those who say there is no employment in the villages:
Farmer is the backbone of our rural countryside. Nowadays, people migrate from villages to Cities. There are plenty of amenities in the villages, let's take advantage of them and plan their self employment in the villages.
unemployment has begun since we began to attract and import foreign crafts and essentials. Demand for our goods has decreased and thus people have become increasingly unemployed.
In recent times, Prime Minister Modiji has initiated a number of projects, including self-employment in villages, and initiated a program to rehabilitate villages in many ways.
It is nice to see people responding to this event today. In our country, there are plenty of pottery, carpentry, blacksmithing, weaving, as well as daily commodities such as soap, toothpowder. It is our responsibility to restart these and take them to the forefront. In the past, baking oil was taken through the air in the villages. By taking the oil from the air as an example, you are trying to outline the benefits that come from the statistics, the jobs that people get and the benefits.
1. The total population of India is approximately one hundred and thirty five (135) crore, consider 4 persons there in one family, which means in India we have 33 crore families and each family average consumption is 2 litre per month, which means India has a requirement of 67 Crore litre of Edible oil.
2. As per our Indian Tradition, if we start extracting oil using Bull driven Ghana, we can extract maximum of 20 litres per day per Ghana. which means we need 11 lakh and 25 thousand Ghana in India.
3. As we know India has 6,51,000 villages, in each village if we install 2 Ghana we can serve the entire requirement of Edible oil in India.
4. Each Ghana require 3 personal, and for 11,25,000 Ghanas, we can generate 33,75,000 employment in village.
5. Each Ghana can be run using 2 Bulls which means we can give job to 22,50,000 Bulls and by which means we can avoid it going to Slaughter houses.
6. By implementing this , around 3 lakh crore money will come to Village. This money is equal to one year's Indian Defense Budget or a 2 year Railway Budget.
See, friends, this is one of the most profitable jobs in the industry. But with the invention of new technology, rural enterprises can still be uplifted.
"Our mission is to help people to live a better life without dwelling in their villages."